Monday, August 20, 2018

Lesson 11 Learn English Speaking Through Kannada Language, Learn English in 30 Days Through Kannada

English Kannada
I am making chocolates. ನಾನು ಚಾಕಲೇಟ್ಸ್ ಮಾಡುತ್ತಿದ್ದೇನೆ.
To make sentences using Simple Present and Present Continuous Tense Simple Present and Present Continuous Tenseಅನ್ನು ಬಳಸಿ ವಾಕ್ಯಗಳನ್ನು ರಚಿಸುವುದು
   
What are you doing? ನೀನು ಏನು ಮಾಡುತ್ತಿರುವೆ?
I’m making chocolates. ನಾನು ಚಾಕಲೇಟ್ಸ್ ಅನ್ನು ಮಾಡುತ್ತಿದ್ದೇನೆ.
For whom are you making chocolates? ನೀನು ಯಾರಿಗಾಗಿ ಚಾಕಲೇಟ್ಸ್ ಅನ್ನು ಮಾಡುತ್ತಿದ್ದೀಯ?
I’m making chocolates for my
brother.
ನಾನು ನನ್ನ ತಮ್ಮನಿಗೋಸ್ಕರ ಚಾಕಲೇಟ್ಸ್ ಅನ್ನು ಮಾಡುತ್ತಿದ್ದೇನೆ. 
He likes chocolates very much. ಅವನು ಚಾಕಲೇಟ್ಸ್ ಅನ್ನು ಬಹಳ ಇಷ್ಟಪಡುತ್ತಾನೆ.
Is your brother studying? ನಿನ್ನ ತಮ್ಮ ಓದುತ್ತಿದ್ದಾನೆಯೇ?
Yes, he is studying. ಹೌದು. ಅವನು ಓದುತ್ತಿದ್ದಾನೆ.
Do you like chocolates? ನೀನು ಚಾಕಲೇಟ್ಸ್ ಅನ್ನು ಇಷ್ಟಪಡುತ್ತೀಯ?
No, I don’t like chocolates. ಇಲ್ಲ. ನಾನು ಚಾಕಲೇಟ್ಸ್ ಅನ್ನು ಇಷ್ಟಪಡುವುದಿಲ್ಲ.
Do you like chocolate ice cream?  ನೀನು ಚಾಕಲೇಟ್ ಐಸ್‍ಕ್ರೀಮ್ ಅನ್ನು ಇಷ್ಟಪಡುತ್ತೀಯ?
Yes, I like chocolate ice cream.  ಹೌದು ನಾನು ಚಾಕಲೇಟ್ ಐಸ್‍ಕ್ರೀಮ್ ಅನ್ನು ಇಷ್ಟಪಡುತ್ತೇನೆ.
   
UNDERSTANDING CONCEPTS ವಿಷಯವನ್ನು ಅರ್ಥಮಾಡಿಕೊಳ್ಳುವುದು
Simple Present Tense ಸಾಮಾನ್ಯ ವರ್ತಮಾನ ಕಾಲ
Use Simple Present when you want to express that an action is repeated or happens usually. ಯಾವುದೇ ಕಾರ್ಯವನ್ನು ಪುನರಾವರ್ತಿಸುವುದನ್ನು ಅಥವಾ ಯಾವಾಗಲೂ ನಡೆಯುವುದನ್ನು ವ್ಯಕ್ತಪಡಿಸಲು ನೀವು ಬಯಸುವಾಗ Simple Present Tense ಅನ್ನು ಬಳಸಿ.
The action can be a habit, hobby, event or something that happens often.   ಕಾರ್ಯವು ರೂಢಿ, ಹವ್ಯಾಸ, ಘಟನೆ ಅಥವಾ ಸಾಮಾನ್ಯವಾಗಿ ನಡೆಯುವ ಇನ್ಯಾವುದೇ ವಿಷಯವಾಗಿರಬಹುದು.
How to make  sentences in Simple Present Tense? Simple Present Tense ನಲ್ಲಿ ವಾಕ್ಯಗಳನ್ನು ಹೇಗೆ ರಚಿಸುವುದು?
Doer ಕರ್ತ
Main Verb ಮುಖ್ಯ ಕ್ರಿಯಾಪದ
I/You/We/They eat apples. ನಾನು/ ನೀವು/ ನಾವು/ ಅವರು ಸೇಬುಗಳನ್ನು ತಿನ್ನುತ್ತಾರೆ.
He/ She eats apples. ಅವನು/ ಅವಳು ಸೇಬುಗಳನ್ನು ತಿನ್ನುತ್ತಾರೆ.
I/You/We/They do not eat apples. ನಾನು/ ನೀವು/ ನಾವು/ ಅವರು ಸೇಬುಗಳನ್ನು ತಿನ್ನುವುದಿಲ್ಲ.
He/She does not eat apples. ಅವನು/ ಅವಳು ಸೇಬುಗಳನ್ನು ತಿನ್ನುವುದಿಲ್ಲ.
Examples of 'Simple Present Tense'  'Simple Present Tense' ನ ಉದಾಹರಣೆಗಳು 
I live in Shimla. ನಾನು ಶಿಮ್ಲಾದಲ್ಲಿ ವಾಸಿಸುತ್ತೇನೆ.
I play tennis in the morning. ನಾನು ಬೆಳಿಗ್ಗೆ ಟೆನ್ನಿಸ್ ಆಡುತ್ತೇನೆ.
He eats fruits in the breakfast. ಅವನು ತಿಂಡಿಯಲ್ಲಿ ಹಣ್ಣುಗಳನ್ನು ತಿನ್ನುತ್ತಾನೆ.
Paris is in France. ಪ್ಯಾರಿಸ್ ಫ್ರಾನ್ಸ್ ನಲ್ಲಿದೆ.
Elephants like to stay in water. ಆನೆಗಳು ನೀರಿನಲ್ಲಿ ಇರಲು ಇಷ್ಟಪಡುತ್ತವೆ.
She drinks a lot of water. ಅವಳು ಸಾಕಷ್ಟು ನೀರನ್ನು ಕುಡಿಯುತ್ತಾಳೆ.
Present Continuous Tense ಅಪೂರ್ಣ ವರ್ತಮಾನ ಕಾಲ
We use present continuous for those actions that are happening now or are in progress at present ನಾವು ಈ ಸಮಯದಲ್ಲಿ ನಡೆಯುತ್ತಿರುವ ಅಥವಾ ವರ್ತಮಾನದಲ್ಲಿ ಪ್ರಗತಿಯಲ್ಲಿರುವ ಕಾರ್ಯಗಳಿಗೆ present continuous ನಲ್ಲಿ ಪ್ರಯೋಗಿಸುತ್ತೇವೆ.
How to make sentences in  Present Continuous present continuous ನಲ್ಲಿ ವಾಕ್ಯಗಳನ್ನು ಹೇಗೆ ರಚಿಸುವುದು?
I am cooking dinner. ನಾನು ಊಟವನ್ನು ತಯಾರಿಸುತ್ತಿದ್ದೇನೆ.
We are playing cricket. ನಾವು ಕ್ರಿಕೆಟ್ ಆಡುತ್ತಿದ್ದೇವೆ.
She is reading the newspaper. ಅವಳು ವಾರ್ತಾ ಪತ್ರಿಕೆಯನ್ನು ಓದುತ್ತಿದ್ದಾಳೆ.
   
He eats food at seven in the evening. ಅವನು ಸಂಜೆ ಏಳು ಗಂಟೆಗೆ ಆಹಾರವನ್ನು ಸೇವಿಸುತ್ತಾನೆ.
She is watching a movie. ಅವಳು ಒಂದು ಮೂವಿಯನ್ನು ನೋಡುತ್ತಿದ್ದಾಳೆ.
He is sleeping in his room.  ಅವನು ತನ್ನ ಕೋಣೆಯಲ್ಲಿ ನಿದ್ರೆ ಮಾಡುತ್ತಿದ್ದಾನೆ.
She learns music.  ಅವಳು ಸಂಗೀತವನ್ನು ಕಲಿಯುತ್ತಾಳೆ.
Monkeys like to eat bananas. ಕೋತಿಗಳು ಬಾಳೇಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತವೆ.
   
I live in Jaipur. ನಾನು ಜೈಪುರ್‌ನಲ್ಲಿ ವಾಸಿಸುತ್ತಿದ್ದೇನೆ.
Ramesh is eating. ರಮೇಶ್ ತಿನ್ನುತ್ತಿದ್ದಾನೆ.
Mohan is playing tennis. ಮೋಹನ್ ಟೆನ್ನಿಸ್ ಆಡುತ್ತಿದ್ದಾನೆ.
They do to the temple everyday. ಅವರು ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಾರೆ.
We don't eat chocolate. ನಾವು ಚಾಕಲೇಟ್ ಅನ್ನು ತಿನ್ನುವುದಿಲ್ಲ.
   

No comments:

Post a Comment