Monday, August 20, 2018

Lesson 5 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language

English Kannada
Describing a place ಸ್ಥಳವನ್ನು ವಿವರಿಸುವುದು
Using "There is, There are , It has". "There is, There are , It has"ಗಳ ಪ್ರಯೋಗ.
Where do you work? ನೀನು ಎಲ್ಲಿ ಕೆಲಸ ಮಾಡುತ್ತಿರುವೆ?
I work at ‘City Hospital’. ನಾನು 'ಸಿಟಿ ಹಾಸ್ಪಿಟಲ್' ನಲ್ಲಿ ಕೆಲಸ ಮಾಡುತ್ತೇನೆ.
Is it a big hospital? ಅದು ದೊಡ್ಡ ಹಾಸ್ಪಿಟಲ್ ಆಗಿದೆಯೇ?
Yes, there are more than 200 employees. ಹೌದು, ಅಲ್ಲಿ ಸುಮಾರು 200 ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ.
There are 30 doctors and 15 surgeons. ಅಲ್ಲಿ 30 ಡಾಕ್ಟರ್‌ಗಳು ಮತ್ತು 15 ಸರ್ಜನ್‌ಗಳಿದ್ದಾರೆ.
What facilities are given to the patients? ಅಲ್ಲಿ ರೋಗಿಗಳಿಗೆ ಯಾವ ಸೌಲಭ್ಯಗಳನ್ನು ನೀಡಲಾಗುತ್ತದೆ?
There is a huge reception area with 10 counters to help patients.  ಇಲ್ಲಿ ರೋಗಿಗಳಿಗೆ ಸಹಾಯ ಮಾಡಲು 10 ಕೌಂಟರ್‌ಗಳ ಜೊತೆಯಲ್ಲಿ ವಿಶಾಲವಾದ ಸ್ವಾಗತ ಸ್ಥಳವಿದೆ
 It has a seating capacity of over 100 people.  ಇದರಲ್ಲಿ 100ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. 
Tell me more about your hospital. ನಿನ್ನ ಹಾಸ್ಪಿಟಲ್‍ನ ಬಗ್ಗೆ ಹೆಚ್ಚಿನ ವಿಚಾರವನ್ನು ತಿಳಿಸು.
It has 10 operation theatres and 5 laboratories with the latest equipment. ಇದು 10 ಆಪರೇಶನ್ ಥಿಯೇಟರ್‍ ಗಳನ್ನು ಮತ್ತು ಅತ್ಯಾಧುನಿಕ ಉಪಕರಣಗಳುಳ್ಳ 5 ಪ್ರಯೋಗಾಲಯಗಳನ್ನು ಹೊಂದಿದೆ.
There are large wards. ಅಲ್ಲಿ ದೊಡ್ಡದಾದ ವಾರ್ಡ್‍ಗಳಿವೆ.
There is a waiting room on every floor with a television. ಪ್ರತಿಯೊಂದು ಮಹಡಿಯಲ್ಲಿ ಟೆಲಿವಿಶನ್‍ಗಳಿರುವ ಕಾಯುವಿಕೆ ಕೊಠಡಿಯಿದೆ.
There is a large canteen on the ground floor.
ಗ್ರೌಂಡ್ ಫ್ಲೋರ್‍‍ನಲ್ಲಿ ದೊಡ್ಡದಾದ ಕ್ಯಾಂಟೀನ್ ಇದೆ.
I like working there. ನಾನು ಅಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ.
 
UNDERSTANDING CONCEPTS ವಿಷಯವನ್ನು ಅರ್ಥಮಾಡಿಕೊಳ್ಳುವುದು
‘There is’, ‘there are’ and  ‘It has’ are the positive words in Present Tense. ‘There is’, ‘there are’ ಮತ್ತು ‘It has’ ಗಳು ವರ್ತಮಾನ ಕಾಲದಲ್ಲಿನ ಸಕಾರಾತ್ಮಕ ಪದಗಳಾಗಿವೆ.
It is used to refer to only one object . ಇದನ್ನು ಒಂದೇ ವಸ್ತುವನ್ನು ಉಲ್ಲೇಖಿಸಲು ಇದನ್ನು ಪ್ರಯೋಗಿಸಲಾಗುತ್ತದೆ.
It is used with singulars (only one) only. ಇದನ್ನು ಕೇವಲ ಏಕವಚನದೊಂದಿಗೆ ಮಾತ್ರ ಉಪಯೋಗಿಸಲಾಗುತ್ತದೆ
It is used to refer to two or more objects. ಇದನ್ನು ಎರಡು ಅಥವಾ ಹೆಚ್ಚು ವಸ್ತುಗಳನ್ನು ಉಲ್ಲೇಖಿಸಲು ಉಪಯೋಗಿಸಲಾಗುತ್ತದೆ.
It is used with plurals only. ಇದನ್ನು ಕೇವಲ ಬಹುವಚನದೊಂದಿಗೆ ಮಾತ್ರ ಉಪಯೋಗಿಸಲಾಗುತ್ತದೆ.
It is used to talk about something which we have introduced earlier  ಮೊದಲೇ ತಿಳಿಸಿರುವಂತಹ ಯಾವುದಾದರ ಬಗ್ಗೆ ಮಾತನಾಡಲು ಇದನ್ನು ಉಪಯೋಗಿಸಲಾಗುತ್ತದೆ.
It is used with both singulars and plurals. ಇದನ್ನು ಏಕವಚನ ಮತ್ತು ಬಹುವಚನಗಳೆರಡರ ಜೊತೆಯಲ್ಲಿಯೂ ಉಪಯೋಗಿಸಲಾಗುತ್ತದೆ.
Examples ಉದಾಹರಣೆ
There is a house. ಅಲ್ಲಿ ಒಂದು ಮನೆ ಇದೆ.
There are many houses. ಅಲ್ಲಿ ಹಲವಾರು ಮನೆಗಳಿವೆ.
This is my house. It has many rooms. It has a garden. ಇದು ನನ್ನ ಮನೆ. ಇದು ಹಲವು ಕೋಣೆಗಳನ್ನು ಹೊಂದಿದೆ. ಇದು ಉದ್ಯಾನವನ್ನು ಹೊಂದಿದೆ.
There is a book. ಇದು ಒಂದು ಪುಸ್ತಕ.
There are five books. ಅಲ್ಲಿ ಐದು ಪುಸ್ತಕಗಳಿವೆ.
This is a story book. It has many  interesting stories. ಇದು ಒಂದು ಕತೆ ಪುಸ್ತಕ. ಇದರಲ್ಲಿ ಹಲವಾರು ಕುತೂಹಲಭರಿತ ಕತೆಗಳಿವೆ.
TRANSLATE TO ENGLISH  ಇಂಗ್ಲೀಷ್‍ನಲ್ಲಿ ಅನುವಾದ ಮಾಡಿ
Choose the correct ENGLISH translation  ಸರಿಯಾದ ಇಂಗ್ಲೀಷ್ ಅನುವಾದವನ್ನು ಆರಿಸಿ
Question and Answers  ಪ್ರಶ್ನೆ ಮತ್ತು ಉತ್ತರಗಳು
There is butter in the fridge. ಫ್ರಿಜ್‍ನಲ್ಲಿ ಬೆಣ್ಣೆ ಇದೆ.
There are clothes in the bag. ಬ್ಯಾಗ್‍ನಲ್ಲಿ ಬಟ್ಟೆಗಳಿವೆ.
Her/ His house is very big. It has many rooms. ಅವನ್/ಅವಳ ಮನೆ ದೊಡ್ಡದಾಗಿದೆ. ಇದು ಅನೇಕ ಕೋಣೆಗಳನ್ನು ಹೊಂದಿದೆ.
It is a big building. It has many offices ಇದು ಒಂದು ದೊಡ್ಡ ಕಟ್ಟಡ. ಇದು ಅನೇಕ ಆಫೀಸಸ್ ಅನ್ನು ಹೊಂದಿದೆ.
There are 52 weeks in a year. ಒಂದು ವರ್ಷದಲ್ಲಿ 52 ವಾರಗಳು ಇರುತ್ತವೆ.
There is a car in front of the house. ಮನೆಯ ಮುಂದೆ ಒಂದು ಕಾರ್ ಇದೆ.
 
There's a computer in my room. ನನ್ನ ಕೋಣೆಯಲ್ಲಿ ಕಂಪ್ಯೂಟರ್ ಇದೆ.
There's no water in the bottle. ಬಾಟಲಿಯಲ್ಲಿ ನೀರಿಲ್ಲ.
This is the tallest building. It has 30 floors. ಇದು ಅತೀ ಎತ್ತರದ ಕಟ್ಟಡ. ಇದರಲ್ಲಿ 30 ಮಹಡಿಗಳಿವೆ. 
There are five rooms in my house. ನನ್ನ ಮನೆಯಲ್ಲಿ ಐದು ಕೋಣೆಗಳಿವೆ.
This is my school. It has a big playground. ಇದು ನನ್ನ ಸ್ಕೂಲ್. ಇದರಲ್ಲಿ ಒಂದು ದೊಡ್ಡ ಆಟದ ಮೈದಾನವಿದೆ.
There are five books on the table. ಮೇಜಿನ ಮೇಲೆ ಐದು ಪುಸ್ತಕಗಳಿವೆ.

No comments:

Post a Comment