Monday, August 20, 2018

Lesson 28 Learn English Speaking Through Kannada Language, Learn English in 30 Days Through Kannada

English Kannada
Offering a helping hand ಸಹಾಯ ಹಸ್ತವನ್ನು ಚಾಚುವುದು
using 'will / will not' will / will not'ನ ಬಳಕೆ
   
What are you doing? ನೀನು ಏನು ಮಾಡುತ್ತಿರುವೆ?
I am taking care of the plants. ನಾನು ಗಿಡಗಳ ಆರೈಕೆಯನ್ನು ಮಾಡುತ್ತಿದ್ದೇನೆ.
Ok. I will help you. ಸರಿ. ನಾನು ನಿನಗೆ ಸಹಾಯ ಮಾಡುತ್ತೇನೆ.
I will water the plants now.  ನಾನು ಗಿಡಗಳಿಗೆ ಈಗ ನೀರನ್ನು ಹಾಕುತ್ತೇನೆ.
You can help me with it. ನೀನು ಇದರಲ್ಲಿ ನನಗೆ ಸಹಾಯ ಮಾಡಬಹುದು.
Ok. Which plants are there in your garden? ಸರಿ. ನಿನ್ನ ಉದ್ಯಾನದಲ್ಲಿ ಯಾವ ಯಾವ ಗಿಡಗಳಿವೆ.
There are rose plants in my garden now. ಈಗ ನನ್ನ ಉದ್ಯಾನದಲ್ಲಿ ಗುಲಾಬಿಯ ಗಿಡಗಳಿವೆ.
 I will also grow sunflowers soon. ನಾನು ಸದ್ಯದಲ್ಲಿಯೇ ಸೂರ್ಯಕಾಂತಿಯನ್ನು ಸಹ ಬೆಳೆಯಲಿದ್ದೇನೆ.
Why don’t you grow fruit trees? ನೀನು ಹಣ್ಣಿನ ಮರಗಳನ್ನು ಏಕೆ ಬೆಳೆಸಲಿಲ್ಲ?
I will not grow fruit trees because they will take many years to mature. ನಾನು ಹಣ್ಣಿನ ಮರಗಳನ್ನು ಬೆಳೆಸಲಿಲ್ಲ ಏಕೆಂದರೆ ಅವು ಬೆಳೆಯಲು ಹಲವು ವರ್ಷಗಳೇ ಬೇಕಾಗುತ್ತದೆ.
I will grow a mango tree in my garden. ನಾನು ನನ್ನ ಉದ್ಯಾನದಲ್ಲಿ ಮಾವಿನ ಮರವನ್ನು ಬೆಳೆಸಲಿದ್ದೇನೆ.
Why ? ಏಕೆ?
Mango is my favourite fruit.  ಮಾವಿನಹಣ್ಣು ನನ್ನ ಮೆಚ್ಚಿನ ಹಣ್ಣಾಗಿದೆ.
I will grow a mango tree so that I can eat mangoes throughout the year.  ನಾನು ಮಾವಿನ ಮರವನ್ನು ಬೆಳೆಸುವುದರಿಂದ ನಾನು ವರ್ಷಪೂರ್ತಿ ಮಾವಿನ ಹಣ್ಣುಗಳನ್ನು ತಿನ್ನಬಹುದು.
  I will also eat the mangoes from your tree. ನಾನೂ ಕೂಡ ನಿನ್ನ ಮರದಿಂದ ಮಾವಿನಹಣ್ಣನ್ನು ತಿನ್ನುತ್ತೇನೆ.
Fine, I am going home now. ಸರಿ, ನಾನು ಈಗ ಮನೆಗೆ ಹೋಗುತ್ತೇನೆ.
Ok. I will meet you in school tomorrow. ಸರಿ, ನಾನು ನಿನ್ನನ್ನು ನಾಳೆ ಸ್ಕೂಲ್‍ನಲ್ಲಿ ಭೇಟಿಯಾಗುತ್ತೇನೆ.
   
We will reach there on time. ನಾವು ಅಲ್ಲಿಗೆ ಸರಿಯಾದ ಸಮಯದಲ್ಲಿ ತಲುಪುತ್ತೇವೆ.
I will become a doctor. ನಾನು ಒಬ್ಬ ಡಾಕ್ತರ್ ಆಗಲಿದ್ದೇನೆ.
I will read this book. ನಾನು ಈ ಪುಸ್ತಕವನ್ನು ಓದಲಿದ್ದೇನೆ.
We will watch a movie. ನಾವು ಒಂದು ಮೂವಿಯನ್ನು ನೋಡೋಣ.
We will eat out tonight. ನಾವು ಇಂದು ರಾತ್ರಿ ಹೊರಗಡೆ ತಿನ್ನೋಣ.
   

No comments:

Post a Comment