Monday, August 20, 2018

Lesson 12 Learn English Speaking Through Kannada Language, Learn English in 30 Days Through Kannada

English Kannada
What are you doing? ನೀನು ಏನು ಮಾಡುತ್ತಿದ್ದೀಯ?
to make questions in Simple Present and Present Continuous Tense Simple Present and Present Continuous Tense ನಲ್ಲಿ ಪ್ರಶ್ನೆಗಳನ್ನು ರಚಿಸುವುದು
   
What are you doing, Anuj? ಅಂಜು, ನೀನು ಏನು ಮಾಡುತ್ತಿದ್ದೀಯ?
I’m cleaning my room.  ನಾನು ನನ್ನ ಕೋಣೆಯನ್ನು ಶುಚಿಗೊಳಿಸುತ್ತಿದ್ದೇನೆ.
Are you also cleaning your room? ನೀನೂ ಸಹ ನಿನ್ನ ಕೊಣೆಯನ್ನು ಶುಚಿಗೊಳಿಸುತ್ತಿರುವೆಯಾ?
No, I’m keeping my clothes in the cupboard. ಇಲ್ಲ. ನಾನು ನನ್ನ ಬಟ್ಟೆಗಳನ್ನು ಕಪ್‌ಬೋರ್ಡ್‌ನಲ್ಲಿ ಇಡುತ್ತಿದ್ದೇನೆ.
Do you want to go out? ನೀನು ಹೊರಗೆ ಹೋಗಲು ಬಯಸುತ್ತೀಯ?
Yes, I want to go out.  ಹೌದು, ನಾನು ಹೊರಗೆ ಹೋಗಲು ಬಯಸುತ್ತೇನೆ.
Where do you want to go? ನೀನು ಎಲ್ಲಿ ಹೋಗಲು ಬಯಸುತ್ತೀಯ?
I want to go to the park.  ನಾನು ಪಾರ್ಕ್‍ಗೆ ಹೋಗಲು ಬಯಸುತ್ತೇನೆ.
Ok. Where is Priya?  ಸರಿ. ಪ್ರಿಯಾ ಎಲ್ಲಿದ್ದಾಳೆ?
Is she studying?  ಅವಳು ಓದುತ್ತಿದ್ದಾಳೆ?
No, she is not studying.   ಇಲ್ಲ, ಅವಳು ಓದುತ್ತಿಲ್ಲ.
What is she doing?   ಅವಳು ಏನು ಮಾಡುತ್ತಿದ್ದಾಳೆ?
She is getting ready to go to school.   ಅವಳು ಸ್ಕೂಲ್‌ಗೆ ಹೋಗಲು ತಯಾರಾಗುತ್ತಿದ್ದಾಳೆ.
Ok. ಸರಿ. 
   
UNDERSTANDING CONCEPTS ವಿಷಯವನ್ನು ಅರ್ಥಮಾಡಿಕೊಳ್ಳುವುದು
Questions In Simple Present Tense Simple Present Tense ನಲ್ಲಿ ಪ್ರಶ್ನೆಗಳು
It is used to ask about those actions that are repeated or  that happen usually.
ಪುನರಾವರ್ತನೆಯಾಗುವ ಅಥವಾ ಸಾಮಾನ್ಯವಾಗಿ ನಡೆಯುವ ಕಾರ್ಯಗಳ ಬಗ್ಗೆ ಕೇಳಲು ಇದನ್ನು ಬಳಸಲಾಗುತ್ತದೆ.
Do you eat fruits?  ನೀನು ಹಣ್ಣುಗಳನ್ನು ತಿನ್ನುತ್ತೀಯ?
What time do you wake up? ನೀನು ಯಾವ ಸಮಯದಲ್ಲಿ ಏಳುತ್ತೀಯಾ?
Does Rohan play piano? ರೋಹನ್ ಪಿಯಾನೋವನ್ನು ನುಡಿಸುತ್ತಾನೆಯೇ?
Please note that "ing" is not used after the verbs while using "do" or "does" in making questions. ಪ್ರಶ್ನೆಗಳನ್ನು ರಚಿಸುವಾಗ ‘Do’ ಮತ್ತು ‘Does’ ಅನ್ನು ಬಳಸುವಾಗ ಕ್ರಿಯಾಪದಗಳ (eat, wake, play) ನಂತರ ‘ing’ ಅನ್ನು ಬಳಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. 
Questions in Present Continuous Tense Present Continuous Tense ನಲ್ಲಿ ಪ್ರಶ್ನೆ 
It is used to ask about those actions that are in progress.  ಪ್ರಗತಿಯಲ್ಲಿರುವ ಕ್ರಿಯೆಗಳ ಕುರಿತಾಗಿ ಕೇಳಲು ಇವುಗಳನ್ನು ಬಳಸಲಾಗುತ್ತದೆ.
Are they going to the market? ಅವರು ಮಾರ್ಕೇಟ್‍ಗೆ ಹೋಗುತ್ತಿದ್ದಾರೆಯೇ?
Is Sonam studying? ಸೋನಮ್ ಕಲಿಯುತ್ತಿದ್ದಾಳೆಯೇ?
Why are you cutting trees? ನೀನು ಮರಗಳನ್ನು ಏಕೆ ಕಡಿಯುತ್ತಿದ್ದೀಯ?
Are your friends playing football? ನಿನ್ನ ಸ್ನೇಹಿತರು ಫುಟ್‍ಬಾಲ್ ಆಡುತ್ತಿದ್ದಾರೆಯೇ?
Please note that in Present Continuous questions, ‘ing’ is used with verb. 
Present Continuous  ಪ್ರಶ್ನೆಗಳಲ್ಲಿ ಕ್ರಿಯಾಪದದ ಜೊತೆಗೆ  ‘ing’  ಅನ್ನು ಕ್ರಿಯಾಪದದೊಂದಿಗೆ ಬಳಸಲಾಗುತ್ತದೆ ಎಂಬುದನ್ನು ಗಮನಿಸಿ
 
Are they sleeping? ಅವರು ನಿದ್ರೆ ಮಾಡುತ್ತಿದ್ದಾರೆಯೇ?
Does Rohan swim? ರೋಹನ್ ಈಜುತ್ತಿದ್ದಾನೆಯೇ?
Are your friends studying? ನಿನ್ನ ಸ್ನೇಹಿತರು ಓದುತ್ತಿದ್ದಾರೆಯೇ?
Does your brother sing? ನಿನ್ನ ತಮ್ಮ ಹಾಡುತ್ತಾನೆಯೇ?
Do you drink tea? ನೀನು ಚಹಾವನ್ನು ಕುಡಿಯುತ್ತೀಯ?
 
 
Does Rahul drink tea? ರಾಹುಲ್ ಚಹಾವನ್ನು ಕುಡಿಯುತ್ತಾನೆಯೇ?
What are you doing? ನೀನು ಏನು ಮಾಡುತ್ತಿರುವೆ?
Is your sister singing? ನಿನ್ನ ತಂಗಿ ಹಾಡುತ್ತಿದ್ದಾಳೆಯೇ?
What do you eat? ನೀನು ಏನನ್ನು ತಿನ್ನುತ್ತೀಯ?
Why are you sleeping? ನೀನು ಏಕೆ ನಿದ್ರೆ ಮಾಡುತ್ತಿದ್ದೀಯ?

No comments:

Post a Comment