| English | Kannada |
| Talk about your neighbourhood | ತಮ್ಮ ನೆರೆಯವರ ಬಗ್ಗೆ ತಿಳಿಸುವುದು |
| To ask questions using ‘Is there any’, ‘Are there any’, ‘Does it have’ | ‘Is there any’, ‘Are there any’, ‘Does it have’ ಗಳ ಪ್ರಯೋಗ ಮಾಡಿ ಪ್ರಶ್ನೆ ಕೇಳುವುದು |
| Hello Deepika | ಹಲೋ ದೀಪಿಕಾ |
| Hello Rohit | ಹಲೋ ರೋಹಿತ್ |
| Tell me about your neighbourhood. | ನನಗೆ ನಿನ್ನ ನೆರೆಯವರ ಬಗ್ಗೆ ತಿಳಿಸು. |
| Are there houses or apartments? | ಅಲ್ಲಿ ಮನೆಗಳು ಅಥವಾ ಅಪಾರ್ಟ್‍ಮೆಂಟ್ಸ್ ಇದೆಯೇ? |
| There are apartments. | ಅಲ್ಲಿ ಅಪಾರ್ಟ್‍ಮೆಂಟ್ಸ್ ಗಳಿವೆ. |
| Are there parks? | ಅಲ್ಲಿ ಪಾರ್ಕ್‍ಗಳಿವೆಯೇ? |
| Yes, there is a big park. | ಹೌದು. ಅಲ್ಲಿ ಒಂದು ದೊಡ್ಡ ಪಾರ್ಕ್ ಇದೆ. |
| Does it have swings? | ಅದರಲ್ಲಿ ಜೋಕಾಲಿಗಳಿವೆಯೇ? |
| Yes, it has many swings for children. | ಹೌದು. ಮಕ್ಕಳಿಗಾಗಿ ಹಲವಾರು ಜೋಕಾಲಿಗಳಿವೆ. |
| Is there a market in your colony? | ನಿನ್ನ ಕಾಲೋನಿಯಲ್ಲಿ ಮಾರುಕಟ್ಟೆ ಇದೆಯೇ? |
| Yes, there is a big market which has many shops. | ಹೌದು. ಒಂದು ದೊಡ್ಡ ಮಾರುಕಟ್ಟೆ ಇದ್ದು ಅದರಲ್ಲಿ ಹಲವಾರು ಅಂಗಡಿಗಳಿವೆ. |
| Does it have a grocery store? | ಅದರಲ್ಲಿ ಕಿರಾಣಿ ಅಂಗಡಿ ಇದೆಯೆ? |
| Yes it has a grocery store. | ಹೌದು, ಅದರಲ್ಲಿ ಕಿರಾಣಿ ಅಂಗಡಿ ಇದೆ. |
| Is there a temple? | ಅಲ್ಲಿ ದೇವಸ್ಥಾನ ಇದೆಯೇ? |
| Yes, there is a temple which is very close to my home. | ಹೌದು, ಅಲ್ಲಿ ಒಂದು ದೇವಾಲಯ ಇದ್ದು ಅದು ನನ್ನ ಮನೆಗೆ ಬಹಳ ಹತ್ತಿರದಲ್ಲಿದೆ. |
| Are there schools, hospitals and libraries? | ಅಲ್ಲಿ ಸ್ಕೂಲ್‍ಗಳು, ಹಾಸ್ಪಿಟಲ್‍ಗಳು ಮತ್ತು ಗ್ರಂಥಾಲಯಗಳು ಇವೆಯೇ? |
| There is a school and a hospital but there isn't a library. | ಅಲ್ಲ ಒಂದು ಸ್ಕೂಲ್ ಮತ್ತು ಒಂದು ಹಾಸ್ಪಿಟಲ್ ಇದೆ ಆದರೆ, ಗ್ರಂಥಾಲಯ ಇಲ್ಲ. |
| Is there a bus stop? | ಅಲ್ಲಿ ಬಸ್ ಸ್ಟಾಪ್ ಇದೆಯೇ? |
| No, the bus stop is a kilometre away. | ಇಲ್ಲ. ಬಸ್ ಸ್ಟಾಪ್ ಒಂದು ಕಿಲೋಮೀಟರ್ ದೂರದಲ್ಲಿದೆ. |
| That's really a good place! | ಅದು ನಿಜವಾಗಿಯೂ ಒಂದು ಒಳ್ಳೆಯ ಪ್ರದೇಶವಾಗಿದೆ! |
| Making Questions using ‘Is there ‘, ‘Are there’, ‘Does it have’
|
‘Is there ‘, ‘Are there’, ‘Does it have’ ಪ್ರಯೋಗ ಮಾಡಿ ಪ್ರಶ್ನೆಗಳನ್ನು ರಚಿಸುವುದು |
| These words are used to ask questions about things. | ಈ ಪದಗಳನ್ನು ವಸ್ತುಗಳ ಕುರಿತಾಗಿ ಪ್ರಶ್ನೆಗಳನ್ನು ಕೇಳಲು ಉಪಯೋಗಿಸಲಾಗುತ್ತದೆ. |
| Making questions using "Is there” | "Is there” ಅನ್ನು ಪ್ರಯೋಗಿಸಿ ಪ್ರಶ್ನೆಯನ್ನು ರಚಿಸುವುದು |
| It is used to ask questions about one thing (singular). | ಇದನ್ನು ಕೇವಲ ಒಂದು ವಸ್ತು (ಏಕವಚನ) ವಿನ ಬಗ್ಗೆ ಪ್ರಶ್ನೆ ಕೇಳಲು ಉಪಯೋಗಿಸಲಾಗುತ್ತದೆ. |
| Is there any vacant room in this hotel? | ಈ ಹೋಟೆಲ್‌ನಲ್ಲಿ ಯಾವುದಾದರೂ ಖಾಲಿ ಕೋಣೆಗಳಿವೆಯೇ? |
| Is there a pencil in the box? | ಬಾಕ್ಸ್ ನಲ್ಲಿ ಪೆನ್ಸಿಲ್ ಇದೆಯೇ? |
| Making questions using “Are there” | “Are there” ಅನ್ನು ಉಪಯೋಗಿಸಿ ಪ್ರಶ್ನೆಗಳನ್ನು ರಚಿಸುವುದು |
| It is used to ask questions about many things(plural). | ಇದನ್ನು ಹಲವು ವಸ್ತುಗಳ (ಬಹುವಚನ) ಕುರಿತಾಗಿ ಪ್ರಶ್ನೆಗಳನ್ನು ಕೇಳಲು ಉಪಯೋಗಿಸಲಾಗುತ್ತದೆ. |
| Are there vacant rooms in this hotel? | ಈ ಹೋಟೆಲ್‌ನಲ್ಲಿ ಖಾಲಿ ಕೋಣೆಗಳಿವೆಯೇ? |
| Are there pencils in the box? | ಬಾಕ್ಸ್ ನಲ್ಲಿ ಪೆನ್ಸಿಲ್‌ಗಳಿವೆಯೇ? |
| Making questions using “Does it have” | “Does it have” ಅನ್ನು ಉಪಯೋಗಿಸಿ ಪ್ರಶ್ನೆಗಳನ್ನು ರಚಿಸುವುದು |
| It is used to ask questions about the things we have introduced earlier. | ನಾವು ಈ ಹಿಂದೆಯೇ ಪರಿಚಯಿಸಲಾಗಿರುವ ವಸ್ತುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಇದನ್ನು ಉಪಯೋಗಿಸಲಾಗುತ್ತದೆ. |
| It is used for both singular and plural things. | ಇದನ್ನು ಏಕವಚನ ಮತ್ತು ಬಹುವಚನ ಎರಡೂ ವಸ್ತುಗಳಿಗೂ ಪ್ರಯೋಗ ಮಾಡಲಾಗುತ್ತದೆ. |
| Your house is very big? Does it have swimming pool? | ನಿಮ್ಮ ಮನೆ ತುಂಬಾ ದೊಡ್ಡದಾಗಿದೆ. ಇದರಲ್ಲಿ ಸ್ವಿಮ್ಮಿಂಗ್ ಫೂಲ್ ಇದೆಯೆ? |
| Does it have a garden? | ಇದು ಉದ್ಯಾನವನ್ನು ಹೊಂದಿದೆಯೇ? |
| Is there a carpet on the floor? | ನೆಲದಲ್ಲಿ ಕಾರ್ಪೆಟ್ ಅನ್ನು ಇದೆಯೇ? |
| Are there ducks in the pond? | ಕೊಳದಲ್ಲಿ ಬಾತುಕೋಳಿಗಳಿವೆಯೇ? |
| Is there water in the bottle? | ಬಾಟಲಿಯಲ್ಲಿ ನೀರು ಇದೆಯೇ? |
| Your school is very small. Does it have a playground? | ನಿಮ್ಮ ಸ್ಕೂಲ್ ಬಹಳ ಚಿಕ್ಕದಾಗಿದೆ. ಇದರಲ್ಲಿ ಆಟದ ಮೈದಾನವಿದೆಯೇ? |
| Are there fruits in the basket? | ಬುಟ್ಟಿಯಲ್ಲಿ ಹಣ್ಣುಗಳಿವೆಯೇ? |
| Is there water in the jug? | ಜಗ್‌ನಲ್ಲಿ ನೀರಿದೆಯೆ? |
| Is there any information about the exams? | ಪರೀಕ್ಷೆಯ ಕುರಿತಾಗಿ ಯಾವುದಾದರೂ ಮಾಹಿತಿ ಇದೆಯೇ? |
| This is a new phone. Does it have a camera? | ಇದು ಒಂದು ಹೊಸ ಫೋನ್. ಇದರಲ್ಲಿ ಕ್ಯಾಮೆರಾ ಇದೆಯೆ? |
| Are there clouds in the sky? | ಆಕಾಶದಲ್ಲಿ ಮೋಡಗಳಿವೆಯೆ? |
| Are there many swings? | ಅಲ್ಲಿ ಹಲವು ಜೋಕಾಲಿಗಳಿವೆಯೇ? |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 6 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language
Subscribe to:
Post Comments (Atom)
No comments:
Post a Comment