Monday, August 20, 2018

Lesson 25 Learn English Speaking Through Kannada Language, Learn English in 30 Days Through Kannada

English Kannada
I watched cricket match yesterday. ನಾನು ನಿನ್ನೆಯ ಕ್ರಿಕೆಟ್ ಪಂದ್ಯವನ್ನು ನೋಡಿದೆ.
Making sentences in 'Past Continuous tense" Past Continuous tense"ನಲ್ಲಿ ವಾಕ್ಯಗಳನ್ನು ರಚಿಸುವುದು
   
Hello  Riya ಹಲೋ ರಿಯಾ
Hello Ravi ಹಲೋ ರವಿ
Yesterday, I went to see the India- Australia cricket match. ನಿನ್ನೆ, ನಾನು ಇಂಡಿಯಾ-ಆಸ್ಟ್ರೇಲಿಯ ಕ್ರಿಕೆಟ್ ಮ್ಯಾಚ್ ಅನ್ನು ನೋಡಲು ಹೋಗಿದ್ದೆ.
Wow! How was your experience? ವಾವ್! ನಿನ್ನ ಅನುಭವ ಹೇಗಿತ್ತು?
Awesome! The stadium was packed with spectators.  ಅತ್ಯದ್ಭುತ! ಸ್ಟೇಡಿಯಂ ವೀಕ್ಷಕರಿಂದ ತುಂಬಿಹೋಗಿತ್ತು.
They were cheering the players. ಅವರು ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು.
I was also cheering for Dhoni when he was hitting boundaries ನಾನೂ ಸಹ ಧೋನಿಗೆ ಆತ ಬೌಂಡರಿಗಳನ್ನು ಹೊಡೆಯುತ್ತಿದ್ದಾಗ ಉತ್ತೇಜನ ನೀಡುತ್ತಿದ್ದೆ.
The drummer was playing drums on every run in the last over and the audience was dancing ಡ್ರಮ್ಮರ್ ಕೊನೆಯ ಓವರ್‍‍ಗಳಲ್ಲಿ ಪ್ರತಿಯೊಂದು ರನ್‍ಗೂ ಡ್ರಮ್ ಭಾರಿಸುತ್ತಿದ್ದರು ಮತ್ತು ಪ್ರೇಕ್ಷಕರು ಕುಣಿಯುತ್ತಿದ್ದರು.
Some Australians were sitting next to me.  ಕೆಲವು ಆಸ್ಟ್ರೇಲಿಯಾದವರು ನನ್ನ ಪಕ್ಕದಲ್ಲಿ ಕುಳಿತಿದ್ದರು.
They were feeling nervous when India was chasing the target. ಇಂಡಿಯಾ ಗುರಿಯನ್ನು ಮುಟ್ಟುವ ಸಮಯದಲ್ಲಿ ಅವರು ಹತಾಶರಾಗಿದ್ದರು.
India won the match in the end. ಕೊನೆಯಲ್ಲಿ ಇಂಡಿಯ ಪಂದ್ಯವನ್ನು ಗೆದ್ದಿತು.
Was there something you did not like? ಅಲ್ಲಿ ನೀನು ಇಷ್ಟ ಪಡದೇ ಇರುವಂತಹದ್ದೇನಾದರೂ ನಡೆಯಿತೇ?
Yes, I did not like some people who were  littering around. ಹೌದು, ಅಲ್ಲಿ ಕೆಲವು ಜನರು ಸುತ್ತಮುತ್ತಲೂ ಕಸವನ್ನು ಹಾಕುತ್ತಿದ್ದುದು ನನಗೆ ಇಷ್ಟವಾಗಲಿಲ್ಲ.
Also, the food at the stalls was being sold at very high rates. ಜೊತೆಗೆ, ಸ್ಟಾಲ್‍ಗಳಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು.
Didn’t you watch this match, Riya? ರಿಯಾ, ನೀನು ಈ ಪಂದ್ಯವನ್ನು ನೋಡಲಿಲ್ಲವೇ?
No, I was sleeping at that time. ಇಲ್ಲ. ನಾನು ಆಸಮಯದಲ್ಲಿ ಮಲಗಿದ್ದೆ.
   
UNDERSTANDING CONCEPTS ವಿಷಯವನ್ನು ಅರ್ಥಮಾಡಿಕೊಳ್ಳುವುದು
Past Continuous Tense Past Continuous Tense
The Past Continuous is used to talk about an action  going on in the past. Past Continuous Tense  ಅನ್ನು ಭೂತಕಾಲದಲ್ಲಿ ನಡೆಯುತ್ತಿರುವ ಕಾರ್ಯದ ಬಗ್ಗೆ ಮಾತನಾಡುವಾಗ ಬಳಸಲಾಗುತ್ತದೆ.
For example, if someone asks you what you were doing yesterday, then you will answer using Past Continuous Tense ಉದಾಹರಣೆಗೆ, ಯಾರಾದರೂ ನೀನು ನಿನ್ನೆ ಏನನ್ನು ಮಾಡುತ್ತಿದ್ದೆ ಎಂದು ಕೇಳಿದರೆ, ಆಗ ನೀವು ಅದಕ್ಕೆ Past Continuous Tense ಪ್ರಯೋಗಿಸಿ ಉತ್ತರಿಸುತ್ತೀರಿ. 
It is not necessary to mention the time of action here. ಇಲ್ಲಿ ಕ್ರಿಯೆಯ ಸಮಯವನ್ನು ತಿಳಿಸುವ ಅವಶ್ಯಕತೆ ಇರುವುದಿಲ್ಲ.
Making positive sentences ಸಕಾರಾತ್ಮಕ ವಾಕ್ಯಗಳನ್ನು ರಚಿಸುವುದು
Doer ಕರ್ತೃ
Verb ಕ್ರಿಯಾಪದ
Remaining sentence ಉಳಿದ ವಾಕ್ಯ
Meaning ಅರ್ಥ
I was playing football ನಾನು ಫುಟ್‍ಬಾಲ್ ಆಡುತ್ತಿದ್ದೆ
She was playing football ಅವಳು ಫುಟ್‍ಬಾಲ್ ಆಡುತ್ತಿದ್ದಳು
He was playing football ಅವನು ಫುಟ್‍ಬಾಲ್ ಅನ್ನು ಆಡುತ್ತಿದ್ದ
You were playing football ನೀನು ಫುಟ್‍ಬಾಲ್ ಆಡುತ್ತಿದ್ದೆ.
They were playing football ಅವರು ಫುಟ್‍ಬಾಲ್ ಆಡುತ್ತಿದ್ದರು
We were playing football ನಾವು ಫುಟ್‍ಬಾಲ್ ಆಡುತ್ತಿದ್ದೆವು
Making negative sentences ನಕಾರಾತ್ಮಕ ವಾಕ್ಯಗಳನ್ನು ರಚಿಸುವುದು
I wasn't playing football ನಾನು ಫುಟ್‍ಬಾಲ್ ಆಡುತ್ತಿರಲಿಲ್ಲ
She wasn't playing football ಅವಳು ಫುಟ್‍ಬಾಲ್ ಆಡುತ್ತಿರಲಿಲ್ಲ
He wasn't playing football ಅವನು ಫುಟ್‍ಬಾಲ್ ಅನ್ನು ಆಡುತ್ತಿರಲಿಲ್ಲ
You weren't playing football ನೀನು ಫುಟ್‍ಬಾಲ್ ಆಡುತ್ತಿರಲಿಲ್ಲ
They weren't playing football ಅವರು ಫುಟ್‍ಬಾಲ್ ಆಡುತ್ತಿರಲಿಲ್ಲ
We weren't playing football ನಾವು ಫುಟ್‍ಬಾಲ್ ಆಡುತ್ತಿರಲಿಲ್ಲ
Ravi was watching the cricket match. ರವಿ ಕ್ರಿಕೆಟ್ ಮ್ಯಾಚ್ ಅನ್ನು ನೋಡುತ್ತಿದ್ದ.
His mother was sleeping. ಅವನ ತಾಯಿ ನಿದ್ರೆ ಮಾಡುತ್ತಿದ್ದಳು.
It was raining yesterday. ನಿನ್ನೆ ಮಳೆ ಬರುತ್ತಿತ್ತು.
They were going to the temple. ಅವರು ದೇವಸ್ಥಾನಕ್ಕೆ ಹೋಗುತ್ತಿದ್ದರು.
We were waiting for Meeta. ನಾವು ಮೀರಾಳಿಗಾಗಿ ಕಾಯುತ್ತಿದ್ದೆವು.
You were playing in the park. ನೀನು ಪಾರ್ಕ್‍ನಲ್ಲಿ ಆಡುತ್ತಿದ್ದೆ.
Ravi wasn't watching the cricket match. ರವಿ ಕ್ರಿಕೆಟ್ ಮ್ಯಾಚ್ ಅನ್ನು ನೋಡುತ್ತಿರಲಿಲ್ಲ.
His mother wasn't sleeping. ಅವನ ತಾಯಿ ನಿದ್ರೆ ಮಾಡುತ್ತಿರಲಿಲ್ಲ.
It wasn't raining yesterday. ನಿನ್ನೆ ಮಳೆ ಬರುತ್ತಿರಲಿಲ್ಲ.
They weren't  going to the temple. ಅವರು ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ.
We weren't  waiting for Meeta. ನಾವು ಮೀರಾಳಿಗಾಗಿ ಕಾಯುತ್ತಿರಲಿಲ್ಲ.
You weren't  playing in the park. ನೀನು ಪಾರ್ಕ್‍ನಲ್ಲಿ ಆಡುತ್ತಿರಲಿಲ್ಲ.
   
Ravi was going to school. ರವಿಯು ಸ್ಕೂಲ್‍ಗೆ ಹೋಗುತ್ತಿದ್ದನು.
Rosy was reading the book. ರೋಸಿ ಪುಸ್ತಕವನ್ನು ಓದುತ್ತಿದ್ದಳು.
We were watching the movie. ನಾವು ಸಿನಿಮಾವನ್ನು ನೊಡುತ್ತಿದ್ದೆವು.
You weren't talking to him. ನೀನು ಅವನೊಂದಿಗೆ ಮಾತನಾಡುತ್ತಿರಲಿಲ್ಲ.
The children weren't playing on the street. ಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿರಲಿಲ್ಲ.
They weren't going anywhere. ಅವರು ಎಲ್ಲಿಗೂ ಹೋಗಿರಲಿಲ್ಲ.
   
Kunal was going to the school. ಕುನಾಲ್ ಸ್ಕೂಲ್‍ಗೆ ಹೋಗುತ್ತಿದ್ದ.
Meeta wasn't driving the car. ಮೀಟಾ ಕಾರ್ ಅನ್ನು ಚಾಲನೆ ಮಾಡುತ್ತಿರಲಿಲ್ಲ.
We were going to sleep. ನಾವು ಮಲಗಲು ಹೋಗುತ್ತಿದ್ದೆವು.
Someone was knocking at the door. ಯಾರೋ ಬಾಗಿಲನ್ನು ಬಡಿಯುತ್ತಿದ್ದರು.
The children weren't studying ಮಕ್ಕಳು ಓದುತ್ತಿರಲಿಲ್ಲ
   

1 comment:

  1. Thanks for the great sharing. This article is much clearer and easier to read Congratulations on staying on track throughout the lesson . I have read a few of the articles on your website now, and I really like your style . I am obliged to you for sharing this informative content on English Grammar Fundamentals here among us .

    ReplyDelete