Monday, August 20, 2018

Lesson 24 Learn English Speaking Through Kannada Language, Learn English in 30 Days Through Kannada

English Kannada
Did you watch the cricket match? ನೀನು ಕ್ರಿಕೆಟ್ ಪಂದ್ಯವನ್ನು ನೋಡಿದೆಯಾ?
Simple past tense - using 'did' & 'WH words' to make questions ಸಾಮಾನ್ಯ ಭೂತಕಾಲ- ಪ್ರಶ್ನೆಗಳನ್ನು ರಚಿಸಲು 'did' & 'WH  ಶಬ್ದಗಳ ಪ್ರಯೋಗ
   
Did you watch India’s match yesterday? ನೀನು ನಿನ್ನೆ ಇಂಡಿಯಾದ ಮ್ಯಾಚ್ ಅನ್ನು ನೋಡಿದೆಯಾ?
No, I didn’t watch the match.  ಇಲ್ಲ. ನಾನು ಮ್ಯಾಚ್ ಅನ್ನು ನೋಡಲಿಲ್ಲ.
Who played with India? ಇಂಡಿಯಾದೊಂದಿಗೆ ಯಾರು ಆಡಿದರು?
Australia played with India.  ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಆಟವಾಡಿತು.
India won the match.   ಇಂಡಿಯಾ ಮ್ಯಾಚ್ ಅನ್ನು ಗೆದ್ದಿತು.
Who played the best? ಯಾರು ಅತ್ಯುತ್ತಮವಾಗಿ ಆಡಿದರು?
Virat Kohli played the best.  ವಿರಾಟ್ ಕೊಹ್ಲಿ ಉತ್ತಮವಾಗಿ ಆಡಿದನು.
He  made a century and took 3 wickets. ಅವನು ಶತಕ ಗಳಿದನು ಮತ್ತು 3 ವಿಕೆಟ್‍ಗಳನ್ನು ಗಳಿಸಿದನು.
I like Virat Kohli.   ನಾನು ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತೇನೆ.
But Dhoni is my favourite player. ಆದರೆ ಧೋನಿ ನನ್ನ ಮೆಚ್ಚಿನ ಆಟಗಾರ.
Did he perform well?    ಅವನು ಉತ್ತಮವಾಗಿ ಆಡಿದನೇ?
Yes. Dhoni also played a good innings of 87 runs. ಧೋನಿಯೂ ಸಹ 87 ರನ್ಸ್ ಬಾರಿಸಿ ಉತ್ತಮ ಇನಿಂಗ್ಸ್ ಆಡಿದನು. 
Did anyone bowl well? ಯಾರಾದರೂ ಉತ್ತಮವಾಗಿ ಬೌಲ್ ಮಾಡಿದರೇ?
Yes. Zaheer Khan took 4 wickets conceding 35 runs.    ಹೌದು ಜಹೀರ್ ಖಾನ್ 35 ರನ್ಸ್ ನೀಡಿ 4 ವಿಕೆಟ್ಸ್ ಪಡೆದನು.
Who was declared the ‘Man of the Match’?  ಯಾರನ್ನು 'ಮ್ಯಾನ್ ಆಫ್ ದ ಮ್ಯಾಚ್' ಎಂದು ಘೋಷಿಸಿದರು?
Virat Kohli was declared the ‘Man of the Match’.
ವಿರಾಟ್ ಕೊಹ್ಲಿಯನ್ನು  'ಮ್ಯಾನ್ ಆಫ್ ದ ಮ್ಯಾಚ್' ಎಂದು ಘೋಷಿಸಿದರು.
I lost the opportunity to watch an entertaining match.  ನಾನು ಇಂತಹ ಮನೋರಂಜನಾತ್ಮಕವಾದ ಮ್ಯಾಚ್ ಅನ್ನು ನೋಡುವ ಅವಕಾಶವನ್ನು ಕಳೆದುಕೊಂಡೆನು.
Why didn’t you watch the match?  ನೀನು ಏಕೆ ಮ್ಯಾಚ್ ಅನ್ನು ನೋಡಲಿಲ್ಲ?
I was in office.  ನಾನು ಆಫೀಸ್‍ನಲ್ಲಿ ಇದ್ದೆ.
   
Did you live/ stay in Saket? ನೀನು ಸಾಕೇತ್‍ನಲ್ಲಿ ವಾಸಿಸುತ್ತಿರುವೆಯಾ?
Why was the door opened? ಬಾಗಿಲು ಏಕೆ ತೆರೆದಿದೆ?
How was your holiday? ನಿನ್ನ ರಜಾದಿನ ಹೇಗಿತ್ತು?
Did Shalini learn English? ಶಾಲಿನಿ ಇಂಗ್ಲೀಷ್ ಅನ್ನು ಕಲಿತಳೇ?
Did they go to Delhi? ಅವರು ಡೆಲ್ಲಿಗೆ ಹೋದರಾ?
   

Lesson 23 Learn English Speaking Through Kannada Language, Learn English in 30 Days Through Kannada

English Kannada
I didn't go to the school today. ನಾನು ಇಂದು ಸ್ಕೂಲ್‍ಗೆ ಹೋಗಿಲ್ಲ.
Simple Past tense - Making negative sentences using did not (didn't) ಸಾಮಾನ್ಯ ಭೂತಕಾಲ - did not (didn't) ಬಳಸಿಕೊಂಡು ನಕಾರಾತ್ಮಕ ವಾಕ್ಯಗಳನ್ನು ರಚಿಸುವುದು
   
Hello Riya, how are you?  ಹಲೋ ರಿಯಾ, ನೀನು ಹೇಗಿದ್ದೀಯ?
Hello Anuj, my day did not go well. ಹಲೋ ಅನುಜ್, ನನ್ನ ದಿನ ಚೆನ್ನಾಗಿರಲಿಲ್ಲ.
 I didn’t go to school today. ನಾನು ಇಂದು ಸ್ಕೂಲ್‍ಗೆ ಹೋಗಿಲ್ಲ.
Why? ಏಕೆ?
I was sick. ನನಗೆ ಹುಶಾರು ಇರಲಿಲ್ಲ.
Sorry to hear that! ಕೇಳಿ ಬೇಸರವಾಯಿತು!
My stomach ached throughout the day. ದಿನವಿಡೀ ನನಗೆ ಹೊಟ್ಟೆ ನೋವಿತ್ತು.
That means you ate something from outside.  ಅಂದರೆ ನೀನು ಏನಾದರೂ ಹೊರಗಿನ ಆಹಾರವನ್ನು ತಿಂದಿರಬೇಕು.
No, I did not eat anything from outside. ಇಲ್ಲ. ನಾನು ಯಾವುದೇ ಹೊರಗಿನ ಆಹಾರವನ್ನು ತಿಂದಿಲ್ಲ.
Ok. I hope you took medicines.   ಸರಿ. ನೀನು ಔಷಧಗಳನ್ನು ತೆಗೆದುಕೊಂಡಿರುವೆ ಎಂದು ನಾನು ನಂಬಿದ್ದೇನೆ.
I did not take any medicine in the morning.  ನಾನು ಬೆಳಿಗ್ಗೆ ಯಾವುದೇ ಔಷಧವನ್ನು ತೆಗೆದುಕೊಳ್ಳಲಿಲ್ಲ.
But I went to a doctor in the evening. ಆದರೆ ನಾನು ಸಂಜೆ ಡಾಕ್ಟರ್ ಹತ್ತಿರ ಹೋಗಿದ್ದೆ.
 He gave me some medicines.  ಅವರು ನನಗೆ ಕೆಲವು ಔಷಧಗಳನ್ನು ನೀಡಿದರು.
Ok. Take care of yourself and have your food on time. ಸರಿ. ನಿನ್ನ ಕಾಳಜಿ ವಹಿಸು ಮತ್ತು ಸರಿಯಾದ ಸಮಯಕ್ಕೆ ನಿನ್ನ ಆಹಾರವನ್ನು ಸೇವಿಸು.
Thanks but I didn’t feel like eating the whole day.  ಧನ್ಯವಾದಗಳು, ಆದರೆ ನನಗೆ ಇಡೀ ದಿನ ಏನೂ ತಿನ್ನಬೇಕು ಎಂದು ಅನಿಸಲಿಲ್ಲ.
I didn’t even eat lunch. ನಾನು ಮಧ್ಯಾಹ್ನದ ಊಟವನ್ನು ಸಹಾ ಮಾಡಿಲ್ಲ.
That’s not right.  ಇದು ಸರಿಯಲ್ಲ.
You should eat properly.   ನೀನು ಸರಿಯಾಗಿ ಊಟಮಾಡಬೇಕು.
I am sorry.    ನನ್ನನ್ನು ಕ್ಷಮಿಸು.
Ok. Get well soon ಸರಿ. ಶೀಘ್ರವಾಗಿ ಗುಣಮುಖನಾಗು
Thank you. ಧನ್ಯವಾದ.
   
I didn't go there. ನಾನು ಅಲ್ಲಿಗೆ ಹೋಗಲಿಲ್ಲ.
They didn't go to the market. ಅವರು ಮಾರುಕಟ್ಟೆಗೆ ಹೋಗಲಿಲ್ಲ.
I didn't open the door. ನಾನು ಬಾಗಿಲನ್ನು ತೆರೆಯಲಿಲ್ಲ.
They didn't know each other. ಅವರಿಗೆ ಪರಸ್ಪರ ಪರಿಚಯವಿಲ್ಲ.
He/ She didn't eat homemade food. ಅವನು/ಅವಳು ಮನೆಯಲ್ಲಿ ಮಾಡಿದ ಆಹಾರವನ್ನು ತಿಂದಿಲ್ಲ.
   

Lesson 22 Learn English Speaking Through Kannada Language, Learn English in 30 Days Through Kannada

English Kannada
How did you spend the last weekend? ಹಿಂದಿನ ವಾರಾಂತ್ಯವನ್ನು ನೀವು ಹೇಗೆ ಕಳೆದಿರುವೆ?
Simple Past Tense- Irregular verbs ಸಾಮಾನ್ಯ ಭೂತಕಾಲ- ಅನಿಯಮಿತ ಕ್ರಿಯಾಪದಗಳು
   
Do you know I went to Kasauli  last week? ನಾನು ಕಳೆದ ವಾರ ಕಸೌಲಿಗೆ ಹೋಗಿದ್ದೆ ಎಂದು ನಿನಗೆ ತಿಳಿದಿದೆಯೇ?
Yes, I know. ಹೌದು, ನನಗೆ ತಿಳಿದಿದೆ.
I took a bus on Friday night and reached Kasauli on Saturday morning.   ನಾನು ಶುಕ್ರವಾರದ ರಾತ್ರಿ ಬಸ್‌ನಲ್ಲಿ ಪ್ರಯಾಣ ಮಾಡಿ ಶನಿವಾರ ಬೆಳಿಗ್ಗೆ ಕಸೌಲಿಯನ್ನು ತಲುಪಿದೆನು.
I met my grandfather there.   ನಾನು ಅಲ್ಲಿ ನನ್ನ ಅಜ್ಜನನ್ನು ಭೇಟಿ ಮಾಡಿದೆನು.
How is your grandfather?  ನಿನ್ನ ಅಜ್ಜ ಹೇಗಿದ್ದಾರೆ?
He is fine.  ಅವರು ಚೆನ್ನಾಗಿದ್ದಾರೆ.
Do you know that he is a famous English teacher and writer?  ಅವರು ಒಬ್ಬ ಪ್ರಖ್ಯಾತ ಇಂಗ್ಲೀಷ್ ಶಿಕ್ಷಕರು ಮತ್ತು ಬರಹಗಾರರಾಗಿರುವರೆಂಬುದು ನಿನಗೆ ತಿಳಿದಿದೆಯೇ?
Yes, I know. You told me about it earlier ಹೌದು, ನನಗೆ ತಿಳಿದಿದೆ. ನೀನು ನನಗೆ ಈ ಮೊದಲೇ ಹೇಳಿದ್ದೆ.
He also taught me English.   ಅವರು ನನಗೆ ಇಂಗ್ಲೀಷ್ ಅನ್ನು ಸಹ ಕಲಿಸಿದ್ದಾರೆ.
That is why you got such good marks in English.   ಅದಕ್ಕಾಗಿಯೇ ನೀನು ಇಂಗ್ಲೀಷ್‍ನಲ್ಲಿ ಅಷ್ಟು ಒಳ್ಳೆಯ ಅಂಕಗಳನ್ನು ಪಡೆದಿರುವೆ.
Thanks for the compliment.  ಪ್ರಶಂಸೆಗೆ ಧನ್ಯವಾದಗಳು.
My grandfather spent  almost all his life as an English teacher. ನನ್ನ ಅಜ್ಜ ತನ್ನ ಹೆಚ್ಚಿನ ಜೀವನವನ್ನು ಇಂಗ್ಲೀಷ್ ಶಿಕ್ಷಕರಾಗಿಯೇ ಕಳೆದರು. 
But you told me that he was also a pilot.  ಆದರೆ ನೀನು ಅವರೊಬ್ಬ ವಿಮಾನ ಚಾಲಕರೂ ಕೂಡ ಆಗಿದ್ದರು ಎಂದು ಹೇಳಿದ್ದೆ.
Yes, he was a pilot initially but he quit that job later and became a teacher.  ಹೌದು, ಅವರು ಮೊದಲು ವಿಮಾನ ಚಾಲಕರಾಗಿದ್ದರು ಆದರೆ ಅವರು ಆ ಕೆಲಸವನ್ನು ತೊರೆದು ನಂತರ ಶಿಕ್ಷಕರಾದರು.
He also wrote a book on English grammar and gifted it to me.   ಅವರು ಇಂಗ್ಲೀಷ್ ವ್ಯಾಕರಣದ ಪುಸ್ತಕವನ್ನು ಕೂಡಾ ಬರೆದಿದ್ದಾರೆ ಮತ್ತು ಅದನ್ನು ನನಗೆ ಕೊಡುಗೆಯಾಗಿ ನೀಡಿದ್ದಾರೆ.
You are so lucky.   ನೀನು ಬಹಳ ಅದೃಷ್ಟಶಾಲಿ.
Thanks. 
ಧನ್ಯವಾದಗಳು.
   
He/ She broke the window. ಅವನು/ಅವಳು ಕಿಟಕಿಯನ್ನು ಮುರಿದರು.
He/ She taught me to play cricket. ಅವನು/ಅವಳು ನನಗೆ ಕ್ರಿಕೆಟ್ ಆಡುವುದನ್ನು ಕಲಿಸಿದರು.
We drank coffee there. ನಾವು ಅಲ್ಲಿ ಕಾಫಿಯನ್ನು ಕುಡಿದೆವು.
We heard someone's voice. ನಾವು ಯಾರದ್ದೋ ಧ್ವನಿಯನ್ನು ಕೇಳಿದೆವು.
He/ She caught someone running. ಅವನು/ಅವಳು ಓಡುತ್ತಿರುವ ಯಾರೋ ವ್ಯಕ್ತಿಯನ್ನು ಹಿಡಿದರು.

Lesson 21 Learn English Speaking Through Kannada Language, Learn English in 30 Days Through Kannada

English Kannada
Talking about the past. ಭೂತ ಕಾಲದ ಬಗ್ಗೆ ಮಾತನಾಡುವುದು
Simple Past Tense - Regular verbs ಸಾಮಾನ್ಯ ಭೂತಕಾಲ- ಸಾಮಾನ್ಯ ಕ್ರಿಯಾಪದಗಳು
   
Do you know the famous director Rituparno Ghosh died last month? ಪ್ರಸಿದ್ಧ ನಿರ್ದೇಶಕರಾದ ರಿತುಪೂರ್ಣೋ ಘೋಷ್ ರವರು ಕಳೆದ ತಿಂಗಳು ನಿಧನರಾದರೆಂದು ನಿನಗೆ ತಿಳಿದಿದೆಯೇ?
Yes, I know.  ಹೌದು. ನನಗೆ ತಿಳಿದಿದೆ.
His colleagues called him ‘Ritu da’.  ಅವರ ಜೊತೆಗಾರರು ಅವರನ್ನು 'ರಿತು ದಾ' ಎಂದು ಕರೆಯುತ್ತಿದ್ದರು.
He was born in Kolkata.  ಅವರು ಕೋಲ್ಕತ್ತಾದಲ್ಲಿ ಜನಿಸಿದರು.
He also studied in Kolkata.  ಅವರು ಕೋಲ್ಕತ್ತಾದಲ್ಲಿಯೇ ಶಿಕ್ಷಣವನ್ನು ಪಡೆದರು.
He started his career in the advertising world.   ಅವರು ತಮ್ಮ ವೃತ್ತಿಯನ್ನು ಜಾಹೀರಾತು ಜಗತ್ತಿನಲ್ಲಿ ಪ್ರಾರಂಭಿಸಿದರು.
He created many popular advertisements.     ಅವರು ಹಲವಾರು ಪ್ರಸಿದ್ಧ ಜಾಹೀರಾತುಗಳನ್ನು ರಚಿಸಿದರು.
He started directing films thereafter.  ಆನಂತರದಲ್ಲಿ ಅವರು ಸಿನಿಮಾ ನಿರ್ದೇಶನವನ್ನು ಆರಂಭಿಸಿದರು.
He received the National Award for 12 of them.  ಅವುಗಳಲ್ಲಿ 12ಕ್ಕೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.
He was also a talented actor.   ಅವರು ಒಬ್ಬ ಅದ್ಭುತ ಕಲಾವಿದರೂ ಕೂಡ ಆಗಿದ್ದರು.
Yes. He also acted in some of his movies.    ಹೌದು. ಅವರು ತಮ್ಮದೇ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
People liked and also praised his acting.  ಜನರು ಅವರ ಅಭಿನಯವನ್ನು ಮೆಚ್ಚಿದರು ಮತ್ತು ಪ್ರಶಂಶಿಸಿದರು.
He was a true artist.     ಅವರೊಬ್ಬ ನಿಜವಾದ ಕಲಾವಿದರಾಗಿದ್ದರು.
   
I lived in Saket. ನಾನು ಸಾಕೆಟ್‍ನಲ್ಲಿ ವಾಸಿಸಿದ್ದೆ.
He/ She opened the door. ಅವನು/ಅವಳು ಬಾಗಿಲನ್ನು ತೆಗೆದರು.
They stayed in a hotel. ಅವರು ಹೋಟೆಲ್‍ನಲ್ಲಿ ತಂಗಿದ್ದರು.
I enjoyed the party. ನಾನು ಪಾರ್ಟಿಯನ್ನು ಆನಂದಿಸಿದೆನು.
They played in the park. ಅವರು ಪಾರ್ಕ್‍ನಲ್ಲಿ ಆಡಿದರು.

Lesson 20 Learn English Speaking Through Kannada Language, Learn English in 30 Days Through Kannada

English Kannada
Where were you? ನೀನು ಎಲ್ಲಿದ್ದೀಯ?
Using 'was / were' was / were' ಗಳ ಪ್ರಯೋಗ 
   
Hello Riya, where were you before coming to Delhi? ಹಲೋ ರಿಯಾ, ನೀನು ದೆಹಲಿಗೆ ಬರುವ ಮೊದಲು ಎಲ್ಲಿ ಇದ್ದೆ?
Hello Anuj, I was in Canada before coming to Delhi. ಹಲೋ ಅಂಜು, ನಾನು ದೆಹಲಿಗೆ ಬರುವ ಮುನ್ನ ಕೆನಡಾದಲ್ಲಿ ಇದ್ದೆ.
Where were you born? ನೀನ ಎಲ್ಲಿ ಹುಟ್ಟಿರುವೆ?
I was born in Kolkata. ನಾನು ಕೋಲ್ಕತ್ತಾದಲ್ಲಿ ಜನಿಸಿದ್ದ್ರೆ.
In which month were you born? ನೀನು ಯಾವ ತಿಂಗಳಿನಲ್ಲಿ ಜನಿಸಿರುವೆ?
I was born in the month of February. ನಾನು ಫೆಬ್ರವರಿ ತಿಂಗಳಿನಲ್ಲಿ ಜನಿಸಿರುವೆ.
Was Deepika your school friend? ದೀಪಿಕಾ ನಿನ್ನ ಸ್ಕೂಲ್‍ನ ಗೆಳತಿಯೇ?
Yes, Deepika was my school friend.  ಹೌದು, ದೀಪಿಕಾ ನನ್ನ ಸ್ಕೂಲ್‍ನ ಗೆಳತಿಯಾಗಿದ್ದಳು.
Deepika is my sister.  ದೀಪಿಕಾ ನನ್ನ ತಂಗಿಯಾಗಿದ್ದಾಳೆ.
Oh, Deepika was a very good singer! ಓಹ್, ದೀಪಿಕಾ ಒಬ್ಬ ಉತ್ತಮ ಗಾಯಕಿಯಾಗಿದ್ದಳು.
Yes, but you were the best in studies.  ಹೌದು, ಆದರೆ ನೀನು ಓದುವುದರಲ್ಲಿ ಅತ್ಯುತ್ತಮವಾಗಿದ್ದೆ.
Thanks, but our talented teachers were the ones behind my success.  ಧನ್ಯವಾದಗಳು, ಆದರೆ ನನ್ನ ಯಶಸ್ಸಿನ ಹಿಂದೆ ನಮ್ಮ ನುರಿತ ಶಿಕ್ಷಕರು ಇದ್ದಾರೆ.
   
I was in Mumbai yesterday. ನಾನು ನಿನ್ನೆ ಮುಂಬಯಿಯಲ್ಲಿದ್ದೆ.
She was a student. ಅವಳು ಒಬ್ಬ ವಿದ್ಯಾರ್ಥಿಯಾಗಿದ್ದಳು.
He wasn't very naughty. ಅವನು ಬಹಳ ತುಂಟನಾಗಿರಲಿಲ್ಲ.
They weren't my friends. ಅವರು ನನ್ನ ಸ್ನೇಹಿತರಾಗಿರಲಿಲ್ಲ.
They were lazy. ಅವರು ಸೋಮಾರಿಗಳಾಗಿದ್ದರು.
   

Lesson 19 Learn English Speaking Through Kannada Language, Learn English in 30 Days Through Kannada

English Kannada
How much coffee do you have? ನೀನು ಎಷ್ಟು ಕಾಫಿಯನ್ನು ಕುಡಿಯುತ್ತೀಯ?
Use of ' Many, few, much, little '  Many, few, much, little ' ಗಳ ಪ್ರಯೋಗ
   
It’s so hot today.  ಇಂದು ಬಹಳ ಸೆಕೆ ಇದೆ.
Yes Anuj, today's the hottest day of the year ಹೌದು ಅನುಜ್, ಇಂದು ಒಂದು ವರ್ಷದ ಅತೀ ಹೆಚ್ಚು ಸೆಕೆಯ ದಿವಾಗಿದೆ.
How much water do you drink throughout the day? ನೀನು ದಿನವಿಡೀ ಎಷ್ಟು ನೀರು ಕುಡಿಯುತ್ತೀಯ?
I usually drink 8-10 glasses of water every day.  ನಾನು ಸಾಮಾನ್ಯವಾಗಿ ಪ್ರತಿದಿನ  8-10 ಗ್ಲಾಸೆಸ್ ನೀರು ಕುಡಿಯುತ್ತೇನೆ.
Ok. I also drink many types of fruit juices along with water. ಸರಿ, ನಾನು ನೀರಿನ ಜೊತೆಗೆ ಹಲವು ವಿಧದ ಹಣ್ಣಿನ ರಸವನ್ನು ಸಹ ಕುಡಿಯುತ್ತೇನೆ.
I only drink a little guava juice.  ನಾನು ಸ್ವಲ್ಪವೇ ಸೀಬೆಹಣ್ಣಿನ ರಸವನ್ನು ಕುಡಿಯುತ್ತೇನೆ.
Do you drink coffee? ನೀನು ಕಾಫಿಯನ್ನು ಕುಡಿಯುತ್ತೀಯ?
No, I don’t have much coffee. ಇಲ್ಲ, ನಾನು ಹೆಚ್ಚು ಕಾಫಿಯನ್ನು ಕುಡಿಯುವುದಿಲ್ಲ.
How many cups of tea do you drink every day? ನೀನು ಪ್ರತಿದಿನ ಎಷ್ಟು ಕಪ್ ಟೀಯನ್ನು ಕುಡಿಯುತ್ತೀಯ?
I drink a few cups of tea .  ನಾನು ಕೆಲವು ಕಪ್‍ಗಳಷ್ಟು ಟೀಯನ್ನು ಕುಡಿಯುತ್ತೇನೆ.
May be 1 or 2 cups  ಸುಮಾರು 1 ಅಥವಾ 2 ಕಪ್‍ಗಳು
I don’t like tea and coffee much.     ನಾನು ಟೀ ಅಥವಾ ಕಾಫಿಯನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ.
We should drink lots of water and juice in summers.  ನಾವು ಬೇಸಿಗೆಯಲ್ಲಿ ಸಾಕಷ್ಟು ನೀರು ಮತ್ತು ಜ್ಯೂಸ್ ಅನ್ನು ಕುಡಿಯಬೇಕು.
I agree with you. ನಾನು ನಿನ್ನ ಮಾತನ್ನು ಒಪ್ಪುತ್ತೇನೆ.
   
There are many students in the class. ತರಗತಿಯಲ್ಲಿ ಬಹಳಷ್ಟು ವಿದ್ಯಾರ್ಥಿಗಳಿದ್ದಾರೆ.
There's a little sugar in the coffee. ಕಾಫಿಯಲ್ಲಿ ಸಕ್ಕರೆ ಕಡಿಮೆ ಇದೆ.
I have few friends. ನನಗೆ ಕೆಲವೇ ಸ್ನೇಹಿತರಿದ್ದಾರೆ.
I don't drink much tea. ನಾನು ಹೆಚ್ಚು ಟೀಯನ್ನು ಕುಡಿಯುವುದಿಲ್ಲ.
Shweta has many dresses. ಶ್ವೇತಾಳ ಹತ್ತಿರ ಬಹಳಷ್ಟು ಉಡುಪುಗಳಿವೆ.

Lesson 18 Learn English Speaking Through Kannada Language, Learn English in 30 Days Through Kannada

English Kannada
The sport I like the most  ನಾನು ಅತೀ ಹೆಚ್ಚು ಇಷ್ಟಪಡುವ ಕ್ರೀಡೆ
Making comparison  of more than two things ಎರಡಕ್ಕಿಂತ ಹೆಚ್ಚು ವಸ್ತುಗಳನ್ನು ಹೋಲಿಕೆ ಮಾಡುವುದು
Use of superlative degree of adjective  ವಿಶೇಷಣದ ‘superlative degree’ ಯ ಪ್ರಯೋಗ 
   
Which sport do you like watching? ನೀನು ಯಾವ ಕ್ರೀಡೆಯನ್ನು ನೋಡಲು ಇಷ್ಟಪಡುತ್ತೀರಿ?
I like football and hockey, but I like cricket the most.  ನಾನು ಫುಟ್‍ಬಾಲ್ ಮತ್ತು ಹಾಕಿಯನ್ನು ಇಷ್ಟಪಡುತ್ತೇನೆ, ಆದರೆ ನಾನು ಕ್ರಿಕೆಟ್ ಅನ್ನು ಹೆಚ್ಚಾಗಿ ಇಷ್ಟಪಡುತ್ತೇನೆ. 
Which is your favourite sport?  ನಿನ್ನ ಮೆಚ್ಚಿನ ಕ್ರೀಡೆ ಯಾವುದು?
I like watching hockey.  ನನಗೆ ಹಾಕಿಯನ್ನು ನೋಡುವುದೆಂದರೆ ಇಷ್ಟ.
It is the most interesting  game. ಇದು ಒಂದು ತುಂಬಾ ಆಸಕ್ತಿದಾಯಕವಾದ ಕ್ರೀಡೆಯಾಗಿದೆ.
But cricket is the most popular sport. ಆದರೆ ಕ್ರಿಕೆಟ್ ಅತ್ಯಂತ ಜನಪ್ರಿಯವಾದ ಕ್ರೀಡೆಯಾಗಿದೆ.
Which cricketer do you like the most? ನಿನಗೆ ಯಾವ ಕ್ರಿಕೆಟರ್ ಬಹಳ ಇಷ್ಟ.
I like Sachin Tendulkar the most.  ನನಗೆ ಸಚಿನ್ ತೆಂಡೂಲ್ಕರ್ ಅಂದರೆ ಬಹಳ ಇಷ್ಟ.
He is  the greatest batsman. ಅವನು ಒಬ್ಬ ಅದ್ಭುತ ಬ್ಯಾಟ್ಸ್ ಮನ್.
Who is the best hockey player? ಹಾಕಿಯ ಸರ್ವಶ್ರೇಷ್ಠ ಆಟಗಾರ ಯಾರು?
Dhanraj Pillay is the best hockey player. ಧನರಾಜ್ ಪಿಳ್ಳೈ ಸರ್ವಶ್ರೇಷ್ಠ ಹಾಕಿ ಆಟಗಾರನಾಗಿದ್ದಾನೆ.
   
He is the most intelligent boy in our class. ಅವನು ನಮ್ಮ ಕ್ಲಾಸ್‍ನಲ್ಲಿಯೇ ಅತ್ಯಂತ ಬುದ್ಧಿವಂತ ಬಾಲಕನಾಗಿದ್ದಾನೆ.
This is the biggest house of this colony. ಇದು ಈ ಕಾಲೋನಿಯ ಅತ್ಯಂತ ದೊಡ್ಡ ಮನೆಯಾಗಿದೆ.
My mother is the most creative person in our family. ನನ್ನ ತಾಯಿಯವರು ನಮ್ಮ ಕುಟುಂಬದಲ್ಲಿನ ಹೆಚ್ಚು ರಚನಾತ್ಮಕ ವ್ಯಕ್ತಿಯಾಗಿದ್ದಾರೆ.
This is the least important work. You can do it later.  ಇದು ಅತ್ಯಂತ ಕಡಿಮೆ ಮಹತ್ವದ ಕೆಲಸವಾಗಿದೆ. ನೀನು ಇದನ್ನು ಆಮೇಲೆ ಮಾಡಬಹುದು.
It is Rohan's  best performance.
ಇದು ರೋಹನ್‍ನ ಅತ್ಯುತ್ತಮ ಕಾರ್ಯನಿರ್ವಹಣೆಯಾಗಿದೆ.